Bigg Boss Kannada 5: Week 2 : Traffic signal inside Bigg Boss house. It's been one week since all the contestants have entered into the big boss's house. Contestants are not consistent with discipline of Big Boss's rules. Although repeatedly warned by the 'Big Boss', contestants are not taking it seriously. So from now, whoever breaks rules in Big Boss House, Traffic Light will give the indication. At this time in Big Boss House, a big fight also happens.
'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳೆಲ್ಲ ಕಾಲಿಟ್ಟು ಒಂದು ವಾರದ ಮೇಲಾಗಿದೆ. ಹೀಗಿದ್ದರೂ, 'ಬಿಗ್ ಬಾಸ್' ಮನೆಯ ನಿಯಮಗಳನ್ನೆಲ್ಲ ಸ್ಪರ್ಧಿಗಳು ಶಿಸ್ತು ಬದ್ಧವಾಗಿ ಪಾಲಿಸುತ್ತಿಲ್ಲ. ಪದೇ ಪದೇ 'ಬಿಗ್ ಬಾಸ್' ಎಚ್ಚರಿಕೆ ನೀಡುತ್ತಿದ್ದರೂ, ಮನೆಯ ನಿಯಮಗಳನ್ನೆಲ್ಲ ಸ್ಪರ್ಧಿಗಳು ಗಾಳಿಗೆ ತೂರುತ್ತಿದ್ದಾರೆ. ಕೊಟ್ಟಿರುವ ಮೈಕ್ ನ ಸರಿಯಾಗಿ ಧರಿಸುವುದಿಲ್ಲ, ಕನ್ನಡದಲ್ಲಿ ಮಾತನಾಡುವುದಿಲ್ಲ, ಆಗಾಗ ನಿದ್ದೆಗೆ ಜಾರುವುದು, ಅವಶ್ಯಕತೆಗಿಂತ ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವುದು... ಹೀಗೆ ಹಲವು ನಿಯಮಗಳನ್ನು ಪಾಲಿಸದ ಕಾರಣ ಮನೆಯೊಳಗೆ ಟ್ರಾಫಿಕ್ ಸಿಗ್ನಲ್ ಇರಿಸಿದ್ದಾರೆ 'ಬಿಗ್ ಬಾಸ್'.! ಮನೆಯ ಮುಖ್ಯ ನಿಯಮಗಳನ್ನು ಎಲ್ಲರೂ ಪದೇ ಪದೇ ಉಲ್ಲಂಘಿಸುತ್ತಿರುವುದರಿಂದ, ನಿಯಮ ಪಾಲನೆ ಬಗ್ಗೆ ಜವಾಬ್ದಾರಿ ಮೂಡಿಸಲು 'ಬಿಗ್ ಬಾಸ್' ಮನೆಯ ಲಿವಿಂಗ್ ಏರಿಯಾದಲ್ಲಿ ಟ್ರಾಫಿಕ್ ಸಿಗ್ನಲ್ ಇರಿಸಲಾಗಿದೆ.ಪ್ರತಿ ಬಾರಿ ಮನೆಯಲ್ಲಿ ಮುಖ್ಯ ನಿಯಮ ಮೀರಿದಾಗ, ಸೈರನ್ ಬಾರಿಸಲಿದೆ ಹಾಗೂ ಟ್ರಾಫಿಕ್ ಸಿಗ್ನಲ್ ನ ಒಂದು ದೀಪ ಬೆಳಗಲಿದೆ. ಇದೇ ಸಮಯದಲ್ಲಿ ಅಲ್ಲೊಂದು ಜಗಳವೂ ನಡೆಯುತ್ತೆ.